WhatsApp Group Join Now

ಭಾರತೀಯ ರಕ್ಷಣಾ ಸಚಿವಾಲಯದ ಆರ್ಮಿ ಆರ್ಡಿನನ್ಸ್ ಕಾರ್ಪ್ಸ್ ಸೆಂಟರನಲ್ಲಿ (AOC) ಟ್ರೇಡ್ಸ್ ಮನ್ ಮೇಟ್, ಫೈರ್ ಮನ್ ಹುದ್ದೆಗಳಿಗಾಗಿ 10th ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ಕುರಿತು ಅಧಿಸೂಚನೆ ಪ್ರಕಟಿಸಿರುವ ರಕ್ಷಣಾ ಸಚಿವಾಲಯ ನಿಗದಿತ ದಿನಾಂಕದೊಳಗೆ ಆನಲೈನನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮೇಲ್ಪಟ್ಟವರಾಗಿರಬೇಕು. ಗರಿಷ್ಠ 25 ವರ್ಷ ಮೀರಿರಬಾರದು. ಇತರೆ ಹಿಂದುಳಿದ (OBC) ಅಭ್ಯರ್ಥಿಗಳಿಗೆ 3 ವರ್ಷ, Sc, St ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ‌ ಇರಲಿದೆ.

ಎಓಸಿಯಲ್ಲಿ 1249 ಟ್ರೇಡಮನ್ ಮೇಟ್, 544 ಫೈರ್ ಮನ್ ಒಟ್ಟು 1793 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಟ್ರೇಡಮನ್ ಮೇಟ್ ಹುದ್ದೆಗೆ sslc ಉತ್ತೀರ್ಣರಾಗಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ಐಟಿಐ ಮಾಡಿದವರಿಗೆ ಆದ್ಯತೆ ಇರುತ್ತದೆ. ಫೈರ್ ಮನ್ ಹುದ್ದೆಗೆ sslc ಪಾಸಾಗಿರಬೇಕು.

ಫೆ.6 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಫೆ.26 ಕೊನೆ ದಿನವಾಗಿದೆ. ಅರ್ಜಿ ಸಲ್ಲಿಸುವವರು ಅಧಿಕೃತ ವೆಬ್ ಸೈಟ್ http://www.aocrecuriment.gov.in/ ಸಂಪರ್ಕಿಸಬಹುದು.

ಟ್ರೇಡ್ ಮನ್ ಮೇಟ್ ಹುದ್ದೆಗೆ ಮಾಸಿಕ 18,000 ರೂ. ನಿಂದ 56,900 ವೇತನ ಶ್ರೇಣಿ ಇದೆ. ಫೈರ್ ಮನ್ ಹುದ್ದೆಗೆ 19,900 ರೂ. ನಿಂದ 63,200 ವೇತನ ಶ್ರೇಣಿ ಇದೆ. ಆಯ್ಕೆಯನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ, ಸಹಿಷ್ಣುತಾ ಪರೀಕ್ಷೆ, ಲಿಖಿತ ಪರೀಕ್ಷೆಗಳು ಇರಲಿವೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷ ಪ್ರೊಬೆಷನರಿ ಪೀರಿಡನಲ್ಲಿ ಕರ್ತವ್ಯ ನಿರ್ವಹಿಸಬೇಕು.

WhatsApp Group Join Now

Leave a Reply

Your email address will not be published. Required fields are marked *