ಹೊಂಗೆ ಮರವು ಹಳ್ಳಿಯ ಜನರಿಗೆ ಚಿರಪರಿಚಿತವಾದ ಗಿಡವಾಗಿದ್ದು. ಇದನ್ನು ತಂಪಾದ ನೆರಳಿಗಾಗಿ ಹೊಲದ ಸುತ್ತ ಮುತ್ತ ರೈತರು ಹಾಕಿಕೊಂಡಿರುತ್ತಾರೆ. ಈ ಮರದ ಕಾಂಡವು ಕೆತ್ತನೆಗೂ ಉಪಯುಕ್ತವಾಗಿದೆ. ಹೊಂಗೆ ಮರಕ್ಕೆ ಸಂಸ್ಕೃತದಲ್ಲಿ ಕರಂಜ, ನಕ್ತಮಾಲ, ಪೂತಿಕ, ಚಿರಬಿಲ್ವ ಎಂಬ ಪರ್ಯಾಯ ಹೆಸರುಗಳಿವೆ. ಹೊಂಗೆ ಮರದ ಹೂವು, ಎಲೆ, ಕಾಯಿ, ಬೀಜಗಳು ಮರದ ಉಪಯುಕ್ತ ಭಾಗಗಳಾಗಿವೆ.
ಚರ್ಮರೋಗಗಳು: ಸರ್ಪಸುತ್ತು, ತುರಿಕಜ್ಜಿ ಮುಂತಾದವುಗಳಿಗೆ ಹೊಂಗೆಯ ಎಣ್ಣೆಯ ಲೇಪನದಿಂದ ನಾವೇ ಉರಿ ಕಡಿಮೆಯಾಗುತ್ತದೆ. ಹೊಂಗೆಯ ಎಣ್ಣೆಯನ್ನು ಹೊಟ್ಟೆಗೆ ತೆಗೆದುಕೊಂಡಲ್ಲಿ ಉದರದ ಜಂತುಗಳು ನಾಶವಾಗುತ್ತವೆ.
ಗಾಯಗಳಾಗಿದ್ದಲ್ಲಿ ಹೊಂಗೆ ಎಣ್ಣೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಎಣ್ಣೆಯನ್ನು ಲೇಪಿಸುಕೊಳ್ಳುವುದಲ್ಲದೇ ಹೊಂಗೆಯ ಎಳೆಯ ಶಾಖ ತೆಗೆದುಕೊಳ್ಳುವುದರ ಮೂಲಕ ಗಾಯಗಳನ್ನು ವಾಸಿಮಾಡಬಹುದಾಗಿದೆ ಹಾಗು ಹುಣ್ಣು ಹಳೆಯದಾಗಿದ್ದಲ್ಲಿ ಹೊಂಗೆಯ ಎಣ್ಣೆಯ ಲೇಪನದಿಂದ ಗಾಯ ವಾಸಿಯಾಗುತ್ತದೆ.
ಕೈ ಕಾಲು ಊತ ಬಂದಿದ್ದಲ್ಲಿ ಹೊಂಗೆಯ ಬೇರಿನ ರಸವನ್ನು ತೆಂಗಿನ ಹಾಲಿನ ಜೊತೆಗೆ ಬೆರೆಸಿ ಸೇವಿಸಬೇಕು.ಕೆಮ್ಮಿನಿಂದ ಬಳಲುವವರು ಹೊಂಗೆಯ ಬೀಜವನ್ನು ಪುಡಿಮಾಡಿ ಸೇವಿಸುವುದರಿಂದ ಕೆಮ್ಮು ಗುಣಮುಖವಾಗುತ್ತದೆ.
ಅಜೀರ್ಣ, ಭೇಧಿ, ಹೊಟ್ಟೆಯುಬ್ಬರವಿರುವಾಗ ಹೊಂಗೆಯ ಚಿಗುರೆಲೆಯ ತಿನ್ನುವುದರಿಂದ ನಿವಾರಣೆಯಾಗುತ್ತದೆ.ಮೈಮೇಲೆ ಪಿತ್ತದ ಗಾದರಿಗಳೆದ್ದಾಗ ಎಳೆಯ ರಸ ಲೇಪಿಸಬೇಕಲ್ಲದೆ ಎಳೆಯ ರಸವನ್ನು ಮೊಸರಿನೊಡನೆ ಬೆರಸಿ ಕುಡಿಯಬೇಕು.
ಸಿಹಿಮೂತ್ರ ರೋಗಿಗಳು ಹೊಂಗೆಯ ಹೂವಿನ ಕಷಾಯ ಕುಡಿಯುವುದರಿಂದ ರೋಗವನ್ನು ಆದಷ್ಟು ಕಡಿಮೆ ಮಾಡಬಹುದು. ತಲೆಯ ಕೂದಲು ಉದುರುತ್ತಿದ್ದರೆ ಹೊಂಗೆಯ ಹೂವನ್ನು ಅರೆದು ಲೇಪಿಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಬೆಳೆಯಾಲಾರಂಭಿಸುತ್ತವೆ.
ಕುರುಗಳಾಗುತ್ತಿದ್ದಲ್ಲಿ ಹೊಂಗೆಯ ಎಲೆಯನ್ನು ಲಕ್ಕಿ ಎಲೆಯೊಂದಿಗೆ ಅರೆದು ಲೇಪಿಸುವುದರಿಂದ ಕುರುಗಳು ಮಾಯವಾಗುತ್ತದೆ. ಮೂಲವ್ಯಾಧಿಯಲ್ಲಿ ರಕ್ತಸ್ರಾವವಾಗುತ್ತಿದ್ದಲ್ಲಿ ಹೊಂಗೆಯ ಬೇರನ್ನು ಅರೆದು ಮಜ್ಜಿಗೆಯೊಂದಿಗೆ ಬೆರೆಸಿ ಸೇವಿಸುವುದರಿಂದ ರಕ್ತಸ್ರಾವವನ್ನು ತಡೆಯಬಹುದು.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.