ನಮಸ್ತೆ ಪ್ರಿಯ ಓದುಗರೇ, ಪ್ರತಿಯೊಬ್ಬ ಮನುಷ್ಯನಿಗೆ ಒಂದಲ್ಲ ಒಂದು ಕೊರತೆ ಇದ್ದೆ ಇರುತ್ತೆ. ಕೆಲವರಿಗೆ ಮದುವೆ ಆಗಿಲ್ಲ ಎಂಬ ಚಿಂತೆ ಇದ್ರೆ,ಮತ್ತೆ ಕೆಲವರಿಗೆ ಮದುವೆ ಆದ್ರೂ ದಾಂಪತ್ಯ ಜೀವನ ಚನಾಗಿಲ್ಲ ಎಂಬ ಕೊರಗು ಇರುತ್ತೆ. ಇನ್ನೂ ಕೆಲವರಿಗೆ ಎಲ್ಲಾ ಇದ್ರೂ ಆರೋಗ್ಯವೇ ಇಲ್ಲವಲ್ಲ ಎಂದು ಯೋಚ್ನೆ ಇರುತ್ತೆ. ಮತ್ತೆ ಕೆಲವರಿಗೆ ಕೌಟುಂಬಿಕ ಕಲಹಗಳು ಮುಗಿಯುವುದೇ ಇಲ್ಲ ಅನ್ನೋ ಚಿಂತೆ ಇರುತ್ತೆ. ಸಮಸ್ಯೆಗಳು ಇದೆ ಎಂದಮೇಲೆ ಅದಕ್ಕೆ ಪರಿಹಾರ ಕೂಡ ಇದ್ದೆ ಇರುತ್ತೆ ಅಲ್ವಾ. ಬನ್ನಿ ಇವತ್ತಿನ ಲೇಖನದಲ್ಲಿ ಸಕಲ ಸಮಸ್ಯೆಗಳಿಗೆ ಪರಿಹಾರ ನೀಡಿ ಬದುಕಿನಲ್ಲಿ ನೆಮ್ಮದಿಯನ್ನು ತಂದು ಕೊಡುವ ಅಪರೂಪದ ಪುಣ್ಯ ಕ್ಷೇತ್ರದ ದರ್ಶನ ಮಾಡಿ ಪುನೀತರಾಗೊಣ. ಉಡುಪಿ ಜಿಲ್ಲೆಯಲ್ಲಿರುವ ಸಾಕಷ್ಟು ಶಕ್ತಿ ಪೀಠಗಳಲ್ಲಿ ಇಂದ್ರಾಣಿಯ ಪಂಚದುರ್ಗಾ ಪರಮೇಶ್ವರಿಯ ಶಕ್ತಿ ಪೀಠವು ಒಂದಾಗಿದೆ. ಈ ಕ್ಷೇತ್ರದಲ್ಲಿ ಮಹಾಲಕ್ಷ್ಮಿ ದೇವಿಯು ಐದು ಲಿಂಗಗಳ ರೂಪದಲ್ಲಿ ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಹರಸುತ್ತಾರೆ. ಹಚ್ಚ ಹಸಿರಿನಿಂದ ಕೂಡಿರುವ ಬೆಟ್ಟದ ಮೇಲಿನ ಈ ದೇಗುಲವನ್ನು 11 ನೆ ಶತಮಾದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಆಲಯವನ್ನು 1993 ರಲ್ಲೀ ನವೀಕರಿಸಲಾಗಿದೆ. ಗರ್ಭ ಗೃಹ, ಮುಖ ಮಂಟಪ, ಪ್ರದಕ್ಷಿಣಾ ಪಥ, ಕಲ್ಯಾಣಿ ಒಳಗೊಂಡ ಈ ದೇಗುಲಕ್ಕೆ ಹೋದರೆ ಮನಸ್ಸು ಅಮ್ಮನವರ ಸಾನಿಧ್ಯದಲ್ಲಿ ಪ್ರಫುಲ್ಲ ಆಗುತ್ತೆ. ಕೌಟುಂಬಿಕ ಸಮಸ್ಯೆ, ದಾಂಪತ್ಯದಲ್ಲಿ ವಿರಸ ಇರುವವರು ಈ ಕ್ಷೇತ್ರಕ್ಕೆ ಬಂದು ಅಮ್ಮನವರಿಗೆ ಸೀರೆ ಸಮರ್ಪಣೆ ಮಾಡುವುದೋ ಅಥವಾ ತಮ್ಮ ಕೈಲಾದ ಸೇವೆಯನ್ನು ಮಾಡುವುದಾಗಿ ಹರಕೆ ಹೊತ್ತರೆ ಆ ಸಂಸ್ಥೆಗಳು ಎಲ್ಲವೂ ಶೀಘ್ರವಾಗಿ ದೂರ ಆಗುತ್ತೆ.
ಈ ಕ್ಷೇತ್ರಕ್ಕೆ ಒಂದು ಪಾರ್ವತಿ ಸ್ವಯಂವರ ಪೂಜೆ ಮಾಡಿಸಿಕೊಂಡು ಹೋದರೆ ವಿವಾಹ ವಿಳಂಬ ಆಗುತ್ತಿರುವ ಹೆಣ್ಣು ಮಕ್ಕಳಿಗೆ ಶೀಘ್ರವೇ ಕಂಕಣ ಭಾಗ್ಯ ದೊರಕುತ್ತದೆ ಎಂದು ಹೇಳಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಇಲ್ಲಿನ ಇಂದ್ರಾಣಿ ತೀರ್ಥದಲ್ಲಿ ಮಿಂದೆದ್ದು, ಅಮ್ಮನವರಿಗೆ ಪೂಜೆ ಸಲ್ಲಿಸಿದರೆ ಪಾಪಗಳು ದೂರವಾಗಿ ಸಕಲ ಒಳ್ಳೆಯದು ಆಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ನಿತ್ಯ ನೂರಾರು ಜನ ಸುಕ್ಷೆತ್ರಕ್ಕೆ ಆಗಮಿಸಿ ಅಮ್ಮನವರನ್ನು ಕಣ್ಣು ತುಂಬಿಕೊಂಡು ಪಾವನ ಆಗ್ತಾ ಇದ್ದಾರೆ. ಇನ್ನೂ ಪುರಾಣಗಳಲ್ಲಿ ವೆದಾಥ್ರಿ ಅಥವಾ ವೆದಾಚಲ ಎಂದು ಉಲ್ಲೇಖಿಸಿರುವ ಈ ಕ್ಷೇತ್ರವು ಚವನ ಮಹರ್ಷಿಗಳು ತಪಸ್ಸು ಆಚರಿಸಿದ ಪುಣ್ಯ ಸ್ಥಳ ಆಗಿದೆ. ಹಿಂದೆ ಚವಣ ಮಹರ್ಷಿಗಳು ರೋಗ ಪೀಡಿತರಾಗಿ ಬಳಲುತ್ತಿದ್ದ ಸಮಯದಲ್ಲಿ ಈ ಸ್ಥಳಕ್ಕೆ ಬಂದು ಘೋರವಾದ ತಪ್ಪಸ್ಸು ಆಚರಿಸಲು ಪ್ರಾರಂಭ ಮಾಡಿದರು, ಅವರ ತಪಸ್ಸನ್ನು ಮೆಚ್ಚಿ ಶ್ರೀಮಾನ್ ನಾರಾಯಣನು ಲಕ್ಷ್ಮೀ ದೇವಿ ಸಮೇತರಾಗಿ ದರ್ಶನ ನೀಡಿ ಚವನ ಮಹರ್ಷಿಗಳ ರೋಗವನ್ನು ಗುಣ ಪಡಿಸಿದರು ಎಂದು ಹೇಳಲಾಗುತ್ತದೆ. ಲಕ್ಷ್ಮೀ ದೇವಿಯು ಇಲ್ಲಿನ ಸೌಂದರ್ಯಕ್ಕೆ ಮನ ಸೋತು ನಾರಾಯಣಿ, ಮಹಾಮಾಯಿ, ಮಹಾಲಕ್ಷ್ಮಿ, ಮಹೇಶ್ವರಿ, ಮಹಾದೇವಿ ಎಂಬ ಐದು ಹೆಸರಿನಲ್ಲಿ ಲಿಂಗ ರೂಪಿನಿ ಆಗಿ ನೆಲೆ ನಿಂತಳು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಒಂದು ಬಾರಿ ಸ್ವರ್ಗದಲ್ಲಿ ದೇವೇಂದ್ರನು ಊರ್ವಶಿಯಲ್ಲಿ ಅನುರಕ್ತನಾಗಿದ್ದನ್ನು ಕಂಡ ಇಂದ್ರನ ಪತ್ನಿ ಆದ ಶಚಿ ದೇವಿಯು ದೇವ ಲೋಕ ಸುಟ್ಟು ಹೋಗಲಿ ಎಂದು ಶಾಪವನ್ನು ನೀಡಿ ಭೂಲೋಕಕ್ಕೆ ಬಂದಳು. ನಂತರ ನಾರದ ಮುನಿಗಳು ಶಚಿ ದೇವಿಗೆ ನೀನು ಚವನ ಮಹರ್ಷಿಗಳು ತಪಸ್ಸನನಾಚರಿಸಿದ ಇಂದ್ರಚಲಂ ಕ್ಕೇ ಹೋಗಿ ಲಕ್ಷ್ಮೀ ದೇವಿಯನ್ನು ಪ್ರಾರ್ಥನೆ ಮಾಡು, ನಿನ್ನ ಸಂಕಷ್ಟ ದೂರ ಆಗುತ್ತೆ ಎಂದು ಹೇಳಿದನು.
ಮುಂದೆ ನಾರದರ ಮಾತಿನಂತೆ ಶಚೀ ದೇವಿಯು ಈ ಸ್ಥಳಕ್ಕೆ ಬಂದು ಪಂಚ ಲಿಂಗಗಳಲ್ಲಿ ನೆಲೆಸಿರುವ ಮಹಾ ಲಕ್ಷಿಮಿಯನ್ನು ಭಕ್ತಿಯಿಂದ ಪೂಜಿಸಿದರು ಫಲವಾಗಿ ಶಚಿ ದೇವಿಯು ಇಂದ್ರನನ್ನು ಸೇರಿದಳು ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಈ ಕ್ಷೇತ್ರಕ್ಕೆ ಆಗಮಿಸಿ ದೇವಿಯನ್ನು ಪೂಜಿಸಿದರೆ ದಾಂಪತ್ಯ ವಿರಸಗಳು ದೂರವಾಗುತ್ತದೆ ಎಂಬ ಪ್ರತೀತಿ ಇದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ಈ ಕ್ಷೇತ್ರವು ಇಂದ್ರಾಣಿ ನದಿಯ ಉಗಮ ಸ್ಥಾನ ಆಗಿದ್ದು, ಇಲ್ಲಿರುವ ಇಂದ್ರಾಣಿ ಕುಂಡದಲ್ಲಿ ಹರಿದು ಬರುವ ನೀರೇ ಮುಂದೆ ಇಂದ್ರಾಣಿ ನದಿಯಾಗಿ ಹರಿಯುತ್ತೆ. ಇಂದ್ರಾಣಿ ನದಿಯನ್ನು ಇಂದ್ರಾಣಿ ನದಿ ಎಂದು ಈ ಭಾಗದ ಜನರು ಕರೆಯುತ್ತಾರೆ. ವರ್ಷದ 350 ದಿನಗಳು ಇಲ್ಲಿನ ಇಂದ್ರಾಣಿ ಕುಂಡದಲ್ಲಿ ನೀರು ಒಂದೇ ರೀತಿ ಹರಿಯುತ್ತಾ ಇರುತ್ತದೆ ಎನ್ನುವುದು ಈ ಕ್ಷೇತ್ರದ ವಿಶೇಷತೆ ಆಗಿದೆ. ಪ್ರತಿ ದಿನ ಇಂದ್ರಾಣಿ ನದಿಯ ಪವಿತ್ರ ಜಾಲದಿಂದ ಪಂಚದುರ್ಗಾ ಪರಮೇಶ್ವರಿ ಅಮ್ಮನವರಿಗೆ ಅಭಿಷೇಕ್ ಮಾಡಲಾಗುತ್ತದೆ. ಈ ಕ್ಷೇತ್ರದಲ್ಲಿ ಪಂಚದುರ್ಗಾ ಪರಮೇಶ್ವರಿ ಅಮ್ಮನವರ ಜೊತೆ ಆಂಜನೇಯ ಸ್ವಾಮಿ, ಮಹಾ ಗಣಪತಿ, ನಾಗ ಗಳ ಸಾನಿಧ್ಯ ಕೂಡ ಇದೆ. ತುಲಾ ಸಂಕ್ರಮಣ ದಂದು ಕಾವೇರಿಯಲ್ಲಿ ಹೇಗೆ ನೀರು ಉದ್ಭವ ಆಗುತ್ತೋ ಹಾಗೆಯೇ ಇಲ್ಲಿ ಕೂಡ ಆಗುತ್ತೆ. ಸಂಕ್ರಮಣದ ದಿನ ಇಂದ್ರಾಣಿ ನದಿಯಲ್ಲಿ ಸ್ನಾನ ಮಾಡಿದರೆ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಹಾಗೂ ಪಾಪಗಳು ಕಳೆಯುತ್ತವೆ ಪುಣ್ಯ ಸಂಚಯನ ಆಗುತ್ತೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಮಂಗಳವಾರ ಹಾಗೂ ಶುಕ್ರವಾರ ನವರಾತ್ರಿ ಅಂದು ಇಲ್ಲಿ ನೆಲೆಸಿರುವ ಪರಮೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನಡೆಯುತ್ತದೆ. ನಿತ್ಯವೂ ತ್ರಿಕಾಲ ಪೂಜೆ ನಡೆಯುತ್ತಿರುವ ಅಮ್ಮನವರಿಗೆ ಭಕ್ತಾದಿಗಳು ಹೂವಿನ ಪೂಜೆ, ಕುಂಕುಮಾರ್ಚನೆ, ಮಹಾ ಮಂಗಳಾರತಿ, ಉಡಿ ಸೇವೆ ಪಾರ್ವತಿ ಸ್ವಯಂವರ, ಚಂಡಿಕಾ ಯಾಗ ಮಾಡಿಸಬಹುದು. ದೇವಾಲಯ ವೂ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ವರೆಗೆ ಸಂಜೆ 4 ರಿಂದ ರಾತ್ರಿ 8 ರ ವರೆಗೆ ದರ್ಶನ ಮಾಡಬಹುದು. ಈ ಪುಣ್ಯ ಕ್ಷೇತ್ರವೂ ಉಡುಪಿಯಿಂದ ಮಣಿಪಾಲ್ ಗೆ ಹೋಗುವ ಮಾರ್ಗ ಮಧ್ಯದಲ್ಲಿ ಕಂಡು ಬರುವ ಜಾಗೃತ ಕ್ಷೇತ್ರ ಆಗಿದೆ. ಈ ದೇಗುಲ ಉಡುಪಿಯಿಂದ 6.3 ಕಿಮೀ, ಮಣಿಪಾಲ್ ಇಂದ 2.3 ಕಿಮೀ ದೂರದಲ್ಲಿದೆ. ಶುಭದಿನ.