ಮನುಷ್ಯನಿಗೆ ಆರೋಗ್ಯ ಯಾವಾಗ ಕೈ ಕೊಡುತ್ತದೆ ಎಂದು ಹೇಳಲು ಬರುವುದಿಲ್ಲ ಇವತ್ತು ಚೆನ್ನಾಗಿ ಜೀವನ ನಡೆಸುತ್ತಿರುವವರು ನಾಳೆ ಅನಾರೋಗ್ಯ ಸಮಸ್ಯೆಯಿಂದ ಹಾಸಿಗೆಯಲ್ಲಿ ಮಲಗಿರುವ ಎಷ್ಟು ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆದಿದೆ ಅಲ್ವಾ ಇದಕ್ಕೆ ಹೇಳುವುದು ಆರೋಗ್ಯ ಸಮಸ್ಯೆ ಬರುವವರೆಗೂ ಮನುಷ್ಯ ನೆಮ್ಮದಿಯಾಗಿ ಇರಬೇಕು. ಬಂದಮೇಲೆ ನನ್ನದು ಅರ್ಧ ಜೀವನವೇ ಹಾಳಾಗಿ ಬಿಟ್ಟಿತು ಎಂದು ಕೊರಗುತ್ತ ಜೀವನ ಸಾಗಿಸಬೇಕಾಗುತ್ತದೆ ಪರಿಸ್ಥಿತಿ ಎದುರಾಗುತ್ತದೆ.

ಮಧುಮೇಹದ ವಿಷಯದಲ್ಲೂ ಕೂಡ ಇದೇ ರೀತಿ ಆಗುತ್ತದೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು ಜೀವನ ಪರಿಯಂತ ಕಾಣುವ ಆರೋಗ್ಯ ಸಮಸ್ಯೆ. ಈ ಕಾಯಿಲೆ ವ್ಯಕ್ತಿಯಲ್ಲಿ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಆತನನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಆದರೆ ಸಮಾಧಾನದ ವಿಷಯ ಏನಪ್ಪಾ ಎಂದರೆ ಈ ಕಾಯಿಲೆಯು ಬಂದ ಬಳಿಕ ಸರಿಯಾದ ಆಹಾರ ಪದ್ಧತಿ ಹಾಗೂ

ವೈದ್ಯರ ಸಲಹೆಗಳನ್ನು ಅನುಸರಿಸುತ್ತಾ ಹೋದರೆ ಮಾತ್ರ ಇದನ್ನು ಹದ್ದು ಬಸ್ತಿನಲ್ಲಿ. ಇಡಬಹುದು ಹೀಗಾಗಿ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಎರಡು ಗಿಡಮೂಲಿಕೆಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಒಂದು ವೇಳೆ ಮನುಷ್ಯನಲ್ಲಿ ಸಕ್ಕರೆ ಕಾಯಿಲೆ ಕಾಣಿಸಿಕೊಂಡರೆ ಆತ ಮೊದಲು ತನ್ನ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡು ಮಧುಮೇಹ ಸಮಸ್ಯೆಯನ್ನು ನಿಯಂತ್ರಣ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಬೇಕು.

ಅಷ್ಟೇ ಅಲ್ಲದೆ ವೈದ್ಯರ ಸಲಹೆಗಳನ್ನು ಹಾಗೂ ಅವರು ನೀಡಿರುವ ಔಷಧಿಗಳನ್ನು ಕೂಡ ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವ ಕಡೆಗೆ ಗಮನ ಹರಿಸ ಬೇಕು. ಮಧುನಾಶಿನಿ ಎಲೆಗಳನ್ನು ಹೆಸರುಬೇಳೆ ಜೊತೆಗೆ ಬೇಯಿಸಿ ಅರೆದು ಅದಕ್ಕೆ ಹಸುವಿನ ತುಪ್ಪ ಸೇರಿಸಿ ತಿಂದರೆ ಬಾಯಿ, ಕರಳು, ಜಠರದ ಹುಣ್ಣು ಗುಣವಾಗುತ್ತೆ.ಹೊಟ್ಟೆಯಲ್ಲಿನ ಹುಳುಗಳು ಸಾಯುತ್ತವೆ. ಇದರ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು ವಾಸಿಯಾಗಿ, ಬಾಯಿ ದುರ್ವಾಸನೆ ದೂರವಾಗುತ್ತೆ.

ಒಂದು ಚಮಚ ಮಧುನಾಶಿನಿ ಚೂರ್ಣಕ್ಕೆ ಒಂದು ಚಮಚ ಅತಿಮಧುರ ಚೂರ್ಣ ಚಿಟಿಕೆ ಅರಸಿಣ ಪುಡಿ ಸೇರಿಸಿ ಕಷಾಯ ಮಾಡಿ ಕುಡಿಯುತ್ತಿದ್ದರೆ ಜ್ವರ, ನೆಗಡಿ, ಕೆಮ್ಮು, ಗಂಟಲ ನೋವು ಗುಣವಾಗುತ್ತೆ. ಸಕ್ಕರೆಯುಕ್ತ ಪಾನಿಯಗಳನ್ನು ಸೇವನೆ ಮಾಡಲೇಬಾರದು ಇನ್ನು ಸಂಸ್ಕರಿಸಿದ ಆಹಾರ ಪದಾರ್ಥಗಳು ಬೇಕರಿ ತಿಂಡಿಗಳು ತಂಪು ಪಾನೀಯಗಳಿಂದ ಎಷ್ಟು ದೂರ ಇರುತ್ತೇವೆಯೋ ಅಷ್ಟು ಒಳ್ಳೆಯದು ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ತಡೆಯಲು ಸಹಕಾರಿ ಆಗುವುದು ಮಾತ್ರವಲ್ಲದೆ ಮಧುಮೇಹವನ್ನು ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು

Leave a Reply

Your email address will not be published. Required fields are marked *