ನಮಸ್ತೇ ಪ್ರಿಯ ಓದುಗರೇ, ಹಾಗಲಕಾಯಿ ರುಚಿಯಲ್ಲಿ ಕಹಿ ಆರೋಗ್ಯಕ್ಕೆ ಸಿಹಿ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಹಾಗಲ ಕಾಯಿ ಅಂದರೆ ಮೂಗು ಮುರಿಯುತ್ತಾರೆ. ಕಾರಣ ಇದರ ರುಚಿ ಕಹಿಯಾಗಿದೆ ಎಂಬುವುದಕ್ಕೆ. ಕರೆಲಾ ಎನ್ನುವುದು ಇದಕ್ಕಿರುವ ಇನ್ನೊಂದು ಹೆಸರು. ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಎರಡು ವಿಷಯವಾಗಿ ತಿಳಿಸಿಕೊಡುತ್ತೇವೆ. ಹಾಗಲ ಕಾಯಿ ಆರೋಗ್ಯಕ್ಕೆ ಎಷ್ಟು ಉತ್ತಮವೋ ಅಷ್ಟೇ ಅತಿಯಾಗಿ ಸೇವನೆ ಮಾಡಿದರೆ ಅದು ವಿಷವೂ ಕೂಡ ಹೌದು.
ಹಾಗಲ ಕಾಯಿ ಕಹಿ ಎಂದು ದೂರ ಸರಿಯುತ್ತಾರೆ. ಮೊದಲಿಗೆ ಮಧುಮೇಹ ಸಮಸ್ಯೆ ಇರುವವರು ಹಾಗಲಕಾಯಿ ರಸ ಸೇವನೆ ಮಾಡಿದರೆ ತುಂಬಾ ಪ್ರಯೋಜನವಿದೆ. ಹಾಗಲ ಕಾಯಿ ಹಸಿಯಾಗಿ ತಿಂದರೆ ಮಧುಮೇಹ ಕಾಯಿಲೆ ಬೇಗನೆ ಗುಣಮುಖ ಆಗುತ್ತದೆ. ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಹಾಗಲಕಾಯಿಯನ್ನು ಸೇರಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಮೊಡವೆ ದೂರವಿಡುವುದು ಮಾತ್ರವಲ್ಲದೆ, ಬೊಕ್ಕೆ, ಶಿಲೀಂಧ್ರ ಸೋಂಕು ಇತ್ಯಾದಿಗಳಿಂದಲೂ ರಕ್ಷಣೆ ಒದಗಿಸುವುದು ಉಂಟು.
ಹಾಗಲ ಗೊಜ್ಜು ಮಾಡಿಕೊಂಡು ಸೇವನೆ ಮಾಡಿದರೆ ರಕ್ತವೂ ಶುದ್ಧವಾಗುತ್ತದೆ. ಹಾಗೂ ಕರುಳು ಬೇನೆ ಮೂಲವ್ಯಾಧಿ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಈ ಹಾಗಲಕಾಯಿ. ಕಹಿ ಅಂಶವನ್ನು ಹೊಂದಿರುವ ಹಾಗಲ ಕಾಯಿ ಪಚನ ಕ್ರಿಯೆಯನ್ನು ಸರಾಗ ಮಾಡಲು ಸಹಕಾರಿ. ಅಷ್ಟೇ ಅಲ್ಲದೇ ಅಜೀರ್ಣತೆ ಅಸಿಡಿಟಿ ಮಲಬದ್ಧತೆಗೆ ಉತ್ತಮವಾದ ಆಹಾರ. ಹಾಗಲ ಕಾಯಿ ಡಯಾಬಿಟಿಸ್ ರೋಗಿಗಳಿಗೆ ರಾಮಬಾಣ ಇದ್ದಂತೆ. ಈ ರೋಗಿಗಳಿಗೆ ಇದು ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಬಹುದು. ಹಾಗಲ ಕಾಯಿಯಲ್ಲಿ ಅಂಶವಿರಲೂ ಕಾರಣ ಇದರಲ್ಲಿ ಇರುವ ಕಿಣ್ವ ಎಂಬ ಅಂಶ. ಹಾಗೂ ಇದು ಜಂತು ಹುಳಗಳನ್ನು ನಾಶ ಪಡಿಸುವಲ್ಲಿ ಸಹಕಾರಿ. ಮಲೇರಿಯ ರೋಗವನ್ನು ನಿಯಂತ್ರಿಸಲು ಈ ಹಾಗಲ ಕಾಯಿಯನ್ನು ಉಪಯೋಗಿಸಬಹುದು ಎಂದು ಮಲೇಷಿಯಾದಲ್ಲಿ ಸಾಂಪ್ರದಾಯಿಕವಾಗಿ ಇದನ್ನು ಬಳಕೆ ಮಾಡುತ್ತಲೇ ಬಂದಿದ್ದಾರೆ. ಆಲ್ಕೋಹಾಲ್ ಸೇವನೆ ಮಾಡಿ ರಾತ್ರಿಯ ನಶೆ ಏರಿದ್ದರೆ, ಆಗ ಇದನ್ನು ನಿವಾರಣೆ ಮಾಡಲು ಹಾಗಲಕಾಯಿ ಬಳಸಬಹುದು. ಇದು ಆಲ್ಕೋಹಾಲ್ ನಿಂದ ಯಕೃತ್ ಗೆ ಆಗುವ ಹಾನಿ ತಪ್ಪಿಸುವುದು ಮತ್ತು ಯಕೃತ್ ನ್ನು ಸರಿಪಡಿಸುವುದು. ಇದು ಯಕೃತ್ ಗೆ ಪೋಷಣೆ ನೀಡುವುದು. ಜೊತೆಗೆ ಜ್ವರಕ್ಕೆ ಸುಟ್ಟ ಗಾಯಗಳಿಗೆ ನೋವಿನಿಂದ ಕೂಡಿರುವ ಗಾಯಗಳು ಚರ್ಮದ ಇನ್ನಿತರ ಎಲ್ಲ ಸಮಸ್ಯೆಗಳಿಗೆ ಹಾಗಲ ಕಾಯಿ ದಿವ್ಯ ಔಷಧ ಅಂತ ಹೇಳಬಹುದು.
ಶಿಶುವಿನ ಜನನಕ್ಕೆ ಸಹಕರಿ ಆಗಲು ಹಾಗಲ ಕಾಯಿ ಬಳಕೆ ಮಾಡಲಾಗುತ್ತದೆ. ಹಾಗಲ ಕಾಯಿಯಿಂದ ಇಷ್ಟೊಂದು ಲಾಭಗಳು ಇವೆ ಅಂತ ತಿಳಿದು ಕೊಂಡಿದ್ಧೀರಿ. ನಿಮಗೆ ಗೊತ್ತಿರುವ ಹಾಗೆ ಅತಿಯಾದರೆ ಕೂಡ ಅಮೃತವೂ ವಿಷವೇ ಅಂತ ಗಾದೆ ಮಾತು ಇದೆ. ಹಾಗೆಯೇ ಹಾಗಲ ಕಾಯಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಷ್ಟೇ ಅತಿಯಾಗಿ ಸೇವನೆ ಮಾಡಿದರೆ ಹಾನಿಯುಂಟು. ಹಾಗಾದರೆ ಅದರ ಬಗ್ಗೆ ತಿಳಿಯೋಣ. ಗರ್ಭಧಾರಣೆ ಮಾಡಿದ ಮಹಿಳೆ ಹಾಗಲಕಾಯಿ ಸೇವನೆ ಮಾಡುವುದರಿಂದ ಗರ್ಭ ನಿಲ್ಲುವುದಿಲ್ಲ. ಕಾರಣ ಇದರಲ್ಲಿರುವ ಮುಮೋಕೆರಿನ್ ಎಂಬ ಅಂಶವೂ ಗರ್ಭಪಾತ ಆಗುವ ಸಾಧ್ಯತೆ ಇರುತ್ತದೆ. ಫಲವತ್ತತೆಗೆ ಔಷಧವನ್ನು ತೆಗೆದುಕೊಳ್ಳುವ ಪುರುಷ ಮಹಿಳೆಯರು ಹಾಗಲಕಾಯಿ ಸೇವನೆ ಮಾಡಬಾರದು ಕಾರಣ ಇದರಿಂದ ಔಷಧೀಯ ಗುಣಗಳು ನಾಶ ಆಗುತ್ತವೆ ಅದರ ಪ್ರಭಾವ ಕಡಿಮೆ ಆಗುತ್ತದೆ. ಹಾಗೂ ಲಿವರ್ ಇನ್ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಇನ್ನೂ ಮಹಿಳೆಯರು ಅಧಿಕವಾಗಿ ಹಾಗಲ ಕಾಯಿ ಸೇವನೆ ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಅಧಿಕ ರಕ್ತಸ್ರಾವ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಹಾಗೂ ಮೂಲವ್ಯಾಧಿ ಸಮಸ್ಯೆ ಉಂಟಾಗಬಹುದು. ಹಾಗೂ ಮಧುಮೇಹಿಗಳಿಗೆ ಒಳ್ಳೆಯದೆಂದು ಅತಿಯಾಗಿ ಸೇವನೆ ಮಾಡಿದರೆ ಸಕ್ಕರೆ ಮಟ್ಟ ತೀರಾ ಕಡಿಮೆ ಆಗಿ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಆದ್ದರಿಂದ ನಿಯಮಿತವಾಗಿ ಹಾಗಲ ಕಾಯಿ ಸೇವನೆ ಮಾಡಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.